ಬೀದರ್ ಜಿಲ್ಲೆಯ ಸೀಮಿ ನಾಗನಾಥ ದೇವರು

ಮಕ್ಕಳ ಭಾಗ್ಯ ಕಲ್ಪಿಸುವ ಸೀಮಿ ನಾಗನಾಥ ನಾಗದೋಷ ನಿವಾರಕ, ಇಲ್ಲಿದೆ ಅಪರೂಪದ ನಾಗಮಾಲೆ ಸಂಪ್ರದಾಯ

ಆನೆಯ ಗರ್ಭಗುಡಿಯಲ್ಲಿ ಕಪ್ಪುವರ್ಣದ 5 ಅಡಿ ಎತ್ತರದ ನಾಗನಾಥ ವಿಗ್ರಹವಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಂದ ಭಕ್ತರಿಗೆ ಸ್ನಾನದ ವ್ಯವಸ್ಥೆ, ಅನ್ನದಾಸೋಹ ಇದೆ. ನಾಗಪಂಚಮಿ ಹಬ್ಬದಂದು ದೇವರಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಹಬ್ಬದಂದು ಸಂಜೆ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಮುಜರಾಯಿ ಇಲಾಖೆ ಮತ್ತು ವ್ಯವಸ್ಥಾಪನ ಸಮಿತಿ ಜಂಟಿಯಾಗಿ ಸಕಲ ಸಿದ್ಧತೆ ಮಾಡಿಕೊಂಡಿವೆ.

ಹೇಗೆ ಅಯ್ಯಪ್ಪಸ್ವಾಮಿಗೆ ಭಕ್ತರು ಮಾಲೆ ಧರಿಸಿ ವ್ರತ ಆಚರಣೆ ಮಾಡುತ್ತಾರೋ ಅದೇ ಮಾದರಿಯಲ್ಲಿ ಇಲ್ಲಿ ಭಕ್ತರು ಶ್ರಾವಣ ಮಾಸದಲ್ಲಿ ನಾಗಮಾಲೆ ಧರಿಸಿ ಸುಮಾರು 41 ದಿನಗಳ ಕಾಲ ವ್ರತಾಚರಣೆ ಮಾಡುತ್ತಾರೆ.

ಈ ದೇವರಿಗೆ ಭಕ್ತಿ, ಭಯದಿಂದ ಹರಕೆ ಹೊತ್ತಿದ್ದರೆ ಎಲ್ಲ ಇಷ್ಟಾರ್ಥ ಈಡೇರಲಿವೆ. ಆದರೆ, ಇಷ್ಟಾರ್ಥ ಪೂರೈಸಿದ ಬಳಿಕ ಹರಕೆ ತೀರಿಸದಿದ್ದರೆ ಈ ದೇವರು ಶಿಕ್ಷೆ ನೀಡುತ್ತಾನೆ ಎಂಬ ಕಾರಣಕ್ಕೆ ಭಕ್ತರು ಬಹಳ ವಿಚಾರ ಮಾಡಿ ದೇವರ ಬಳಿ ಹರಕೆ ಇಟ್ಟುಕೊಳ್ಳುತ್ತಾರೆ. ಅಷ್ಟೇ ಭಯ, ಭಕ್ತಿಯಿಂದ ಹರಕೆ ತೀರಿಸುತ್ತಾರೆ.

ನಾಗದೋಷ ನಿವಾರಕವೆಂದು ಪ್ರಸಿದ್ಧ ಪಡೆದಿರುವ ಬೀದರ್‌ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವೆಂದರೆ ಸೀಮಿ ನಾಗನಾಥ. ಈ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ.

ನಾಗದೋಷ ನಿವಾರಕ, ವಿವಾಹವಾಗದವರಿಗೆ ಕಲ್ಯಾಣ ಭಾಗ್ಯ ಕಲ್ಪಿಸುವ ದೇವ, ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ನೀಡುವ ಕರುಣಾಮಯಿ, ಭಕ್ತಿಯಿಂದ ಹರಕೆ ಹೊತ್ತ ಭಕ್ತರಿಗೆ ಇಷ್ಟಾರ್ಥ ಈಡೇರಿಸುವ ಚಮತ್ಕಾರಿ, ಮಹಿಳೆಯರಿಗೆ ವಿಶೇಷ ಅಚ್ಚು ಮೆಚ್ಚಿನ ದೇವ,

ಇಷ್ಟಾರ್ಥ ಪೂರೈಸಿದ ಬಳಿಕ ಹರಕೆ ತೀರಿಸದಿದ್ದರೆ ಶಾಪ, ಶಿಕ್ಷಿಸುವ ದೇವರೇ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಸೀಮಿ ನಾಗನಾಥ ದೇವರು